ಉಪಸ್ಥಾನ: ಜಪದ ಕೊನೆಯಲ್ಲಿ ನಮಸ್ಕಾರ ಮುದ್ರೆಯಿಂದ ನಿಂತುಕೊಂಡು ಮಂತ್ರಾನುಸಂಧಾನಪೂರ್ವಕ ಮಾಡುವ ದೇವತಾ ಉಪಾಸನೆ. ತ್ರಿಕಾಲ ಸಂಧ್ಯಾವಂದನೆಯಲ್ಲಿ ಮಾಡುವುದು ಆಯಾ ಕಾಲದ ಸಂಧ್ಯೋಪಸ್ಥಾನ. ಅಗ್ನಿ ಕಾರ್ಯಾನಂತರ ಮಾಡುವುದು ಅಗ್ನ್ಯುಪಸ್ಥಾನ. ಹೀಗೆ ಆಯಾ ಕಾರ್ಯಾಭೇದದಿಂದ ಉಪಸ್ಥಾನಗಳೂ ಭಿನ್ನವಾಗುತ್ತವೆ.							      (ಎಸ್.ಎನ್.ಕೆ.)

ವರ್ಗ: ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ